Crime NewsLatestTop Storiesರಾಜ್ಯ-Karnatakaರಾಷ್ಟ್ರೀಯ-National

ಹತ್ರಾಸ್ ಕಾಲ್ತುಳಿತ ಪ್ರಕರಣ: ಪ್ರಮುಖ ಆರೋಪಿ ದೆಹಲಿ ಪೊಲೀಸರಿಗೆ ಶರಣು

ನವದೆಹಲಿ: ಜುಲೈ 2 ರಂದು ಉತ್ತರ ಪ್ರದೇಶದ (Uttar Pradesh) ಹತ್ರಾಸ್‍ನಲ್ಲಿ 121 ಜನರ ಸಾವಿಗೆ ಕಾರಣವಾದ ಕಾಲ್ತುಳಿತ ಪ್ರಕರಣದ (Hathras Stampede) ಪ್ರಮುಖ ಆರೋಪಿ ದೇವಪ್ರಕಾಶ್ ಮಧುಕರ್ ದೆಹಲಿಯಲ್ಲಿ ಪೊಲೀಸರಿಗೆ ಶರಣಾಗಿದ್ದಾನೆ. ಆತನನ್ನು ಉತ್ತರ ಪ್ರದೇಶ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಆರೋಪಿ ಪರ ವಕೀಲರು ತಿಳಿಸಿದ್ದಾರೆ.

ಪೊಲೀಸರಿಗೆ ಶರಣಾದ ಮಧುಕರ್ ಸತ್ಸಂಗದ ಮುಖ್ಯ ಸೇವಾದಾರನಾಗಿದ್ದ. ಈತ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ರಾಸ್‍ನ ಸಿಕಂದರಾ ರಾವ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ FIR ನ ಪ್ರಕಾರ ಏಕೈಕ ಆರೋಪಿಯಾಗಿದ್ದಾನೆ. ಸದ್ಯ ಆತ ದೆಹಲಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಇದೇ ವೇಳೆ ದೆಹಲಿಯ ಪೊಲೀಸರು, ಎಸ್‍ಐಟಿ ಮತ್ತು ಎಸ್‍ಟಿಎಫ್‍ಗೆ ಕರೆ ಮಾಡಿ ಶರಣಾಗಿದ್ದಾನೆ ಎಂದು ಆತನ ಪರ ವಕೀಲರು ವೀಡಿಯೋ ಸಂದೇಶದ ಮೂಲಕ ತಿಳಿಸಿದ್ದಾರೆ. ಇದನ್ನೂ ಓದಿ: ಸ್ಪೈಸ್ ಜೆಟ್ ಏರ್‌ಲೈನ್ಸ್ ಎಡವಟ್ಟಿನಿಂದ 12 ಗಂಟೆ ವಿಮಾನದಲ್ಲೇ ಪ್ರಯಾಣಿಕರು ಲಾಕ್‌

https://youtu.be/H321Hvd7Xug?si=J9LEXosFbHW63FBt

ಮಧುಕರ್ ಯಾವುದೇ ತಪ್ಪು ಮಾಡದ ಕಾರಣ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸುವುದಿಲ್ಲ. ಈ ಪ್ರಕರಣದಲ್ಲಿ ನಮ್ಮ ಅಪರಾಧವೇನು? ವಿಚಾರಣೆ ವೇಳೆ ಆತನಿಗಿರುವ ಹೃದಯ ಸಮಸ್ಯೆಯನ್ನು ಪೊಲೀಸರು ಪರಿಗಣನೆಗೆ ತೆಗೆದುಕೊಳ್ಳಬೇಕು. ಆತನಿಂದ ಏನು ತಪ್ಪಾಗಿಲ್ಲ ಎಂದು ಆರೋಪಿ ಪರ ವಕೀಲರು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಯ್ತು ರೌಡಿಶೀಟರ್ ಗಳ ಫ್ಯಾನ್ ಪೇಜ್ ಗಳು

https://youtu.be/VNniaOrSpzQ?si=HwkGETbZBNlW2oIY

ಇದಕ್ಕೂ ಮುನ್ನ ಮಧುಕರ್ ಬಂಧನಕ್ಕೆ ಸಹಕಾರಿಯಾಗುವ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ನೀಡುವುದಾಗಿ ಉತ್ತರ ಪ್ರದೇಶ ಪೊಲೀಸರು ಘೋಷಿಸಿದ್ದರು. ಇನ್ನೂ ಈ ಪ್ರಕರಣ ಸಂಬಂಧ ಗುರುವಾರ ಭೋಲೆ ಬಾಬಾನ (Bhole Baba) ಸತ್ಸಂಗದ ಸಂಘಟನಾ ಸಮಿತಿಯ ಸದಸ್ಯರಾಗಿದ್ದ ಇಬ್ಬರು ಮಹಿಳಾ ಸ್ವಯಂಸೇವಕರು ಸೇರಿದಂತೆ ಆರು ಜನರನ್ನು ಬಂಧಿಸಲಾಗಿತ್ತು. ಇದನ್ನೂ ಓದಿ: ಪೆನ್‌ಡ್ರೈವ್‌ ಪ್ರಜ್ವಲ್‌ಗೆ ಜೈಲೇ ಗತಿ: ಜಾಮೀನು ಅರ್ಜಿ ​ ಮುಂದೂಡಿಕೆ

Share with Friends
author avatar
News Desk