Latestಬೆಂಗಳೂರು-Bengaluruರಾಜಕೀಯ | Politicsರಾಜ್ಯ-Karnataka

ರಸ್ತೆಗಾದ್ರೂ ಇಳಿಲಿ ಬೀದಿಗಾದ್ರೂ ಇಳಿಲಿ, KMF ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡಬಾರದು: ಭೀಮಾನಾಯ್ಕ್

ಬೆಂಗಳೂರು: ನಂದಿನಿ ಹಾಲಿನ ದರದಲ್ಲಿ 50 ml ಹೆಚ್ಚಿಸಿದ್ದು, 2 ರೂಪಾಯಿ ಮಾಡಲಾಗಿದ್ದು, ನಾಳೆಯಿಂದ ಜಾರಿಗೆ ಬರಲಿದ್ದು, ಇದಕ್ಕೆ ಬಿಜೆಪಿಯಿಂದ ಭಾರೀ ವಿರೋಧಕ್ಕೆ ಭೀಮಾನಾಯ್ಕ್ ಪ್ರತಿಕ್ರಿಯೆ ನೀಡಿದ್ದಾರೆ.

ಹಾಲಿನ ದರದ ಏರಿಕೆಯಾದ ಬೆನ್ನಲೇ ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತಪಡಿಸಿದೆ. ಇದೀಗ ಈ ಬಗ್ಗೆ ಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ಅವರು ಪ್ರತಿಕ್ರಿಯಿಸಿದ್ದು, ಬಿಜೆಪಿ ಅವರು ಹೋರಾಟ ಮಾಡಲೇಬೇಕು ಯಾಕೆ ಎಂದರೆ ಅವರು ವಿರೋಧ ಪಕ್ಷದವರು. ಅದಕ್ಕೆಂದೇ ಅವರಿಗೆ ವಿರೋಧ ಪಕ್ಷದ ಸ್ಥಾನ ನೀಡಿರೋದು ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಪ್ರಜ್ವಲ್‌ಗೆ ಮತ್ತೊಂದು ಸಂಕಷ್ಟ – ಪ್ರಜ್ವಲ್‌, ಪ್ರೀತಂ ಗೌಡ ವಿರುದ್ಧ ಎಫ್​ಐಆರ್​ ದಾಖಲು

ಕೇಂದ್ರದಲ್ಲಿ 10 ವರ್ಷದಿಂದ ಬಿಜೆಪಿ ಎಷ್ಟೆಲ್ಲಾ ಬೆಲೆ ಏರಿಕೆ ಮಾಡಿದೆ ಅಂತ ಜನರಿಗೆ ಗೊತ್ತು. ಬಿಜೆಪಿ ಹತ್ತು ವರ್ಷದಿಂದ ರಾಷ್ಟ್ರದ ಜನರ ರಕ್ತ ಹೀರಿದ್ದಾರೆ. ಅವರು ರಸ್ತೆಗಾದ್ರೂ ಇಳಿಲಿ ಬೀದಿಗಾದ್ರೂ ಇಳಿಲಿ ಕೆಎಂಎಫ್ ವಿಚಾರದಲ್ಲಿ ರಾಜಕಾರಣ ಬಿಜೆಪಿ ಮಾಡಬಾರದು ಎಂದರು. 30ಲಕ್ಷ ಲೀಟರ್ ಹಾಲನ್ನ ಪೌಡರ್ ಮಾಡ್ತತಿರುವುದರಿಂದ ಹಣ ಡೆಡ್ ಇನ್ವೆಸ್ಟ್‌ಮೆಂಟ್ ಆಗುತ್ತೆ. ಹೀಗಾಗಿ ಬೋರ್ಡ್ ಅಲ್ಲಿ ಚರ್ಚೆ ಮಾಡಿ ತೀರ್ಮಾನ ತೆಗೆದುಕೊಂಡಿದ್ದೇವೆ ಎಂದರು.

https://youtu.be/97Xqp_kxIBQ?si=xiAMVfuF0J0ukgdO

ಯಾವುದೇ ರೀತಿ ಹಾಲಿನ‌ ದರ ಹೆಚ್ಚಳ‌ ಮಾಡಿಲ್ಲ ಹೆಚ್ಚುವರಿಯಾಗಿ 50ml ಸೇರಿಸುತ್ತಿದ್ದೇವೆ. ಅದಕ್ಕಾಗಿ ದರದಲ್ಲಿ 2 ರೂಪಾಯಿ ಹಣ ಹೆಚ್ಚಿಸಿದ್ದೇವೆ ಹೊರತು ಹಾಲಿನ ದರದಲ್ಲಿ ಹೆಚ್ಚಿಸಿಲ್ಲ. ವಿಚಾರ ತಿಳಿದುಕೊಂಡು ವಿಜಯೇಂದ್ರ ಹಾಗೂ ಆರ್ ಅಶೋಕ ಅವರು ಮಾತನಾಡಲಿ, ಟ್ವೀಟ್ ಮಾಡಲಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪ್ರೀತಂ ಗೌಡಗೆ ಯಾವುದೇ ಕ್ಷಣದಲ್ಲಾದ್ರೂ ಎಸ್‌ಐಟಿ ನೋಟಿಸ್‌ ನೀಡುವ ಸಾಧ್ಯತೆ

Share with Friends
author avatar
News Desk