Crime NewsLatestಬೆಂಗಳೂರು-Bengaluruರಾಜ್ಯ-Karnataka

6 ದಿನಗಳ ಕಾಲ ದರ್ಶನ್ ಸೇರಿ 13 ಜನರಿಗೆ ಗ್ರಿಲ್

ಬೆಂಗಳೂರು: ರೇಣುಕಾ ಸ್ವಾಮಿ (Renuka Swami) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಲೇಂಜಿಂಗ್‌ ದರ್ಶನ್ (Darshan) ಸೇರಿ 13 ಜನರನ್ನು 6 ದಿನ ನ್ಯಾಯಾಲಯ ಪೊಲೀಸ್‌ ಕಸ್ಟಡಿಗೆ ನೀಡಿದೆ.

ದರ್ಶನ್ ಸೇರಿ 13 ಜನರಿಗೆ ಆರು ದಿನಗಳ ಕಾಲ ವಿಚಾರಣೆ ನಡೆಯಲಿದ್ದು, ಕೊಲೆ ಕೇಸ್‌ಗೆ ಸಂಬಂಧಿಸಿದಂತೆ ಪೊಲೀಸರು ಸಾಕ್ಷ್ಯಾಗಳನ್ನು ಕಲೆ ಹಾಕುವ ಕೆಲಸವನ್ನು ಇಂದಿನಿಂದ ಆರಂಭವಾಗಲಿದ್ದಾರೆ. ಆರೋಪಿಗಳನ್ನ ಕರೆದೊಯ್ದ ರೇಣುಕಾಸ್ವಾಮಿಯನ್ನ ಕೂಡಿ ಹಾಕಿ ಹಲ್ಲೆ ಮಾಡಿದ ಜಾಗ, ಕೊಲೆಯಾದ ಸ್ಥಳ, ಬಾಡಿ ಬಿಸಾಡಿದ ಜಾಗದಲ್ಲೆಲ್ಲ ಪೊಲೀಸರು ಮಹಜರು ನಡೆಸಲಿದ್ದಾರೆ. ಇದನ್ನೂ ಓದಿ: ಶವ ವಿಲೇವಾರಿ ಮಾಡಲು 30 ಲಕ್ಷಕ್ಕೆ ಡೀಲ್‌ – ದರ್ಶನ್ ಟೀಂ ಸಿಕ್ಕಿಬಿದ್ದಿದ್ದು ಹೇಗೆ?

ಜೊತೆಗೆ ಮೃತದೇಃವನ್ನ ಬಿಸಾಡಲು ಯಾರೆಲ್ಲ ಹೋಗಿದ್ದರು, ಯಾವ ಸ್ಥಳದಲ್ಲಿ ಮೃತದೇಹ ಬಿಸಾಡಿದ್ರು ಎಂದು ಪೊಲೀಸರು ಆರೋಪಿಗಳನ್ನು ಕರೆದೊಯ್ದು ಮಹಜರು ಮಾಡಲಿದ್ದಾರೆ. ಅಲ್ಲದೇ ರೇಣುಕಾಸ್ವಾಮಿ ಕರೆತಂದ ಜಾಗದಿಂದ ಹಿಡಿದು ಎಲ್ಲೆಲ್ಲಿ ಕರೆದೊಯ್ದರು, ಕೂಡಿ ಹಾಕಿ ಹಲ್ಲೆ ಮಾಡಿದ ಜಾಗ, ಹಲ್ಲೆಗೆ ಬಳಕೆ ಮಾಡಿದ ಹಲವಾರು ಆಯುಧಗಳು, ಅದೆ ಅಯುಧಗಳನ್ನೆಲ್ಲ ಬೇರೆ ಬೇರೆ ಕಡೆ ಬಿಸಾಡಿದ್ದಾರೆ. ಇದನ್ನೂ ಓದಿ: ಮಿಲಿಟರಿ ವಿಮಾನ ಅಪಘಾತ; ಮಲಾವಿಯ ಉಪಾಧ್ಯಕ್ಷ ಚಿಲಿಮ್ ಸೇರಿ 9 ಮಂದಿ ಸಾವು

ಸದ್ಯ ಪೊಲೀಸರು ಬಿಸಾಡಿರುವ ವೆಪನ್‌ಗಳನ್ನ ವಶಕ್ಕೆ ಪಡೆಯಲು ಸಿದ್ಧತೆ ನಡೆಸುತ್ತಿದ್ದಾರೆ. ಜೊತೆಗೆ ಆರೋಪಿಗಳ ಮೊಬೈಲ್‌ ಡೇಟಾ ಸಂಗ್ರಹ ಮಾಡಿ ಕೃತ್ಯ ನಡೆದಾಗ ಯಾವ್ಯಾಗ ಆರೋಪಿ ಎಲ್ಲೆಲ್ಲಿ ಇದ್ದರೂ ಎನ್ನವುದು ಖಾಲಿ ಪಡೆ ಪತ್ತೆ ಹಚ್ಚಲ್ಲಿದ್ದಾರೆ. ಇನ್ನು ರೇಣೂಕಾಸ್ವಾಮಿ ಹುಟ್ಟುರಿಗೂ ಕರೆದೊಯ್ದುಮಹಜರು ಮಾಎಡಲು ಪೊಲೀಸರು ಸಿದ್ಥತೆ ಮಾಡಿಕೊಳ್ಳುತ್ತಿದ್ದಾರೆ. ಈ ದಿನಗಳಲ್ಲಿ ಎಲ್ಲಾ ಪ್ರಕ್ರಿಯೆ ಪುರ್ಣಗೊಳಿಸಲು ಸಹ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಮಾಹಿತಿ , ಪ್ರಸಾರ ಖಾತೆ ಸಚಿವರಾಗಿ ಅಶ್ವಿನಿ ವೈಷ್ಣವ್ ಅಧಿಕಾರ ಸ್ವೀಕಾರ

Share with Friends
author avatar
News Desk