Crime NewsLatestಬೆಂಗಳೂರು-Bengaluruರಾಜ್ಯ-Karnataka

ಪತ್ನಿಯನ್ನು ಹತ್ಯೆಗೈದಿದ್ದ ಪಾಪಿ ಪತಿ – ಆರೋಪಿ ಬಂಧನ

ಬೆಂಗಳೂರು: ಬಾಡಿಗೆ ವಿಚಾರವಾಗಿ ಪತ್ನಿಯನ್ನು (Wife) ಚಾಕುವಿನಿಂದ ಇರಿದು ಹತ್ಯೆಗೈದು ತಲೆಮರೆಸಿಕೊಂಡಿದ್ದ ಪಾಪಿ ಪತಿಯನ್ನು ಸರ್ಜಾಪುರ ಪೊಲೀಸರು (Police) ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಗಂಗಿರೆಡ್ಡಿ ಎಂದು ಗುರುತಿಸಲಾಗಿದೆ. ಮನೆ ಬಾಡಿಗೆ ಹಣ ಪಡೆಯುವ ವಿಚಾರವಾಗಿ ಹಾಗೂ ಆಕೆಯ ಶೀಲವನ್ನು ಶಂಕಿಸಿ ಹೆಂಡತಿಯ ಜೊತೆ ಆರೋಪಿ ಆಗಾಗ ಗಲಾಟೆ ನಡೆಸುತ್ತಿದ್ದ. ಅಲ್ಲದೇ ಆರೋಪಿ ಬಾಡಿಗೆ ಹಣವನ್ನು ಕುಡಿದು ಹಾಳು ಮಾಡುತ್ತಿದ್ದ ಎಂದು ಪತ್ನಿಯೇ ಹಣ ಪಡೆಯುತ್ತಿದ್ದಳು. ಇದನ್ನೂ ಓದಿ:ಆಂಧ್ರ ಬಿಜೆಪಿ ಅಧ್ಯಕ್ಷೆ ಪುರಂದೇಶ್ವರಿ ಲೋಕಸಭೆಯ ಸ್ಪೀಕರ್‌

https://youtu.be/AIedS4838dw?si=feZ-15k6459LOdah

ಇದೇ ಕಾರಣಕ್ಕೆ ಗಂಗರೆಡ್ಡಿ ತನ್ನ ಪತ್ನಿ ಸುಜಾತ (41) ಎಂಬಾಕೆಯನ್ನು ಜೂ.3 ರಂದು ಚಾಕುವಿನಿಂದ ಇರಿದು ಹತ್ಯೆಗೈದಿದ್ದ.

ಹತ್ಯೆಯ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದ. ಇದೀಗ ಆರೋಪಿಯನ್ನು ಬಂಧಿಸಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ:ಪ್ರಜ್ವಲ್ ವಿರುದ್ಧದ ಅತ್ಯಾಚಾರ ಅಪಹರಣ- ಬಸವನಗುಡಿ ನಿವಾಸದಲ್ಲಿ ಎಸ್‍ಐಟಿ ಮಹಜರು

https://youtu.be/N__BjhNj9eo?si=QsS43b2tBKaF6Oh5


Share with Friends
author avatar
News Desk