ಮಂಡ್ಯದ ಗಂಡು ಅಂಬರೀಶ್ ಜನ್ಮ ಜಯಂತಿ: ಕುಟುಂಬ, ಫ್ಯಾನ್ಸ್ ನಿಂದ ಪೂಜೆ
ಹೆಸರಾಂತ ಹಿರಿಯ ನಟ ಮಂಡ್ಯದ ಗಂಡು ಅಂಬರೀಶ್ (Ambarish) ಅವರ ಹುಟ್ಟುಹಬ್ಬವನ್ನು (Birthday) ಅಭಿಮಾನಿಗಳು ಮತ್ತು ಅವರ ಕುಟುಂಬ ಬೆಂಗಳೂರಿನ ಕಂಠೀರವ ಸ್ಟುಡಿಯೋದ (Kanteerva Studio) ಅಂಬಿ ಸಮಾಧಿ ಬಳಿ ಆಚರಿಸಿದರು. ಅಂಬರೀಶ್ ಅವರ ಸಮಾಧಿಗೆ ಪೂಜೆ ಸಲ್ಲಿಸುವ ಮೂಲಕ ಹುಟ್ಟು ಹಬ್ಬವನ್ನು ಆಚರಿಸಲಾಯಿತು.
ಬೆಳಗ್ಗೆ ಅಂಬರೀಶ್ ಸಮಾಧಿ ಬಳಿ ಆಗಮಿಸಿದ ಸುಮಲತಾ ಅಂಬರೀಶ್, ಅಭಿಷೇಕ್ ಅಂಬರೀಶ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮತ್ತು ಅಸಂಖ್ಯಾತ ಅಭಿಮಾನಿಗಳು ಸಮಾಧಿಗೆ ಪೂಜೆ ಸಲ್ಲಿಸಿದರು. ಕುಟುಂಬಸ್ಥರು ಪೂಜೆ ಸಲ್ಲಿಸಿದ ನಂತರ ಅಭಿಮಾನಿಗಳು ಕೂಡ ತಮ್ಮ ನೆಚ್ಚಿನ ನಟನ ಸಮಾಧಿಗೆ ಪೂಜೆ ಸಲ್ಲಿಸಿದರು.

ಎಂದಿನಂತೆ ಅವರ ಹುಟ್ಟು ಹಬ್ಬದ ಪ್ರಯುಕ್ತ ಸಕ್ಕರೆ ನಾಡು ಮೈಸೂರಿನಲ್ಲಿ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿಭಾ ಪುರಸ್ಕಾರ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಮೊದಲು ಅಂಬರೀಶ್ ಅವರನ್ನ ಮಲವಳ್ಳಿ ಹುಚ್ಚೇಗೌಡ ಅಮರನಾಥ್ ಎನ್ನತ್ತಿದ್ದರು. ಇಂದು ಅವರು ಇದಿದ್ದರೆ 72 ವರ್ಷದ ಜನ್ನದಿನವನ್ನು ಆಚರಿಸಿಕೊಳ್ಳೂತ್ತಿದ್ದರು. ಅಂಬರೀಷ್ ಅವರು 20ನೇ ವಯಸ್ಸಿಗೆ ಚಿತ್ರರಂಗಕ್ಕೆ ಬಂದರು. ವಿಷ್ಣುವರ್ಧನ್ ನಟನೆಯ ‘ನಾಗರಹಾವು’ ಚಿತ್ರದಲ್ಲಿ ವಿಲನ್ ಪಾತ್ರ ಮಾಡಿ ಗಮನ ಸೆಳೆದರು. ಆ ಬಳಿಕ ಅವರಿಗೆ ಹಲವು ಆಫರ್ಗಳು ಬರುತ್ತಾ ಹೋದವು. ವಿಲನ್ ಆಗಿ, ಹೀರೋ ಆಗಿ, ಪೊಲೀಸ್ ಅಧಿಕಾರಿಯಾಗಿ ಅವರು ಮಿಂಚಿದರು. ಅವರು ಮಾಡಿದ ಪಾತ್ರಗಳು ಗಮನ ಸೆಳೆದಿವೆ. 2019ರಲ್ಲಿ ರಿಲೀಸ್ ಆದ ‘ಕುರುಕ್ಷೇತ್ರ’ ಅವರ ನಟನೆಯ ಕೊನೆಯ ಸಿನಿಮಾ.
