Latestಬಾಗಲಕೋಟೆರಾಜ್ಯ-Karnataka

ಮಗು ಸತ್ತಿದ್ದೆ ಎಂದು ಅಂತ್ಯಸಂಸ್ಕಾರಕ್ಕೆ ಸಿದ್ಧತೆ- ಅಂತ್ಯಸಂಸ್ಕಾರದ ವೇಳೆ ಕೆಮ್ಮಿದ ಕಂದಮ್ಮ

ಬಾಗಲಕೋಟೆ: ಅಂತ್ಯಸಂಸ್ಕಾರಕ್ಕೆ (Funeral) ಸಿದ್ಧತೆ ನಡೆಸುತ್ತಿದ್ದ ಸಂದರ್ಭದಲ್ಲಿ ಮಗುವೊಂದು (Baby) ಕೆಮ್ಮುವ ಮೂಲಕ ಅಚ್ಚರಿ (Shock) ಮೂಡಿಸಿದ ಘಟನೆ ಬಾಗಲಕೋಟೆ (Bagalkote) ಜಿಲ್ಲೆಯ ಇಳಕಲ್ (Ilkal, Bagalkote) ನಗರದಲ್ಲಿ ನಡೆದಿದೆ.

13 ತಿಂಗಳ ದ್ಯಾಮಣ್ಣ ಭಜಂತ್ರಿ ಬದುಕಿದ ಮಗು. ಬಸವರಾಜ ಭಜಂತ್ರಿ ಹಾಗೂ ನೀಲಮ್ಮ ದಂಪತಿಯ ಈ ಮಗು ಉಸಿರಾಟದ ತೊಂದರೆ ಸೇರಿದಂತೆ ಬಹುಅಂಗಾಂಗ ವೈಫಲ್ಯದಿಂದ ಮಗು ಬಳಲುತಿತ್ತು. ಕಳೆದ ನಾಲ್ಕೈದು ದಿನಗಳ ಹಿಂದೆ ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತಿತ್ತು. ಆದರೆ ವೈದ್ಯರು ಮಗು ಬದುಕುವುದು ಕಷ್ಟ ಎಂದು ಹೇಳಿದ್ದರು. ಬಲಿಕ ವಾಹನದಲ್ಲಿ ವಾಪಸ್‌ ಬಂದಿದ್ದಾರೆ. ವಾಪಸ್‌ ಬರುವ ವೇಳೆ ಮಗು ಪ್ರಜ್ಞೆ ತಪ್ಪಿದೆ. ಇದನ್ನೂ ಓದಿ:ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋರಟ ಕಾರು ಪಲ್ಟಿ -ನಾಲ್ವರು ಸ್ಥಳದಲ್ಲೇ ಸಾವು!

https://youtu.be/EX8Otkuxgrk?si=sfvQZWxAaspuskIH

ಪ್ರಜ್ಞೆ ತಪ್ಪಿದ ಮಗು ಮೃತಪಟ್ಟಿದೆ ಎಂದು ಭಾವಿಸಿ ಪೋಷಕರು ಸಂಬಂಧಿಕರಿಗೆ ಸಾವಿನ ಸುದ್ದಿ ಮುಟ್ಟಿಸಿದ್ದರು. ಅದರಂತೆ ಸಂಬಂಧಿಕರು ಅಂತ್ಯಸಂಸ್ಕಾರಕ್ಕೆ ಅಂತ ಬಂದಿದ್ದು, ಸಿದ್ಧತೆ ನಡೆಸುತ್ತಿದ್ದ ಸಂದರ್ಭದಲ್ಲಿ ಮಗು ಕೆಮ್ಮಿದೆ. ಈ ವೇಳೆ ಮಗು ಬದುಕಿದೆ ಎಂದು ಪೋಷಕರು ನಿಟ್ಟುಸಿರು ಬಿಟ್ಟರೆ, ಇತ್ತ ಅಂತ್ಯಸಂಸ್ಕಾರಕ್ಕೆಂದು ಬಂದವರಿಗೆ ಅಚ್ಚರಿಯಾಗಿದೆ. ಇದನ್ನೂ ಓದಿ: ನಾನು ಪಾಲಿಗ್ರಾಫ್​ ಪರೀಕ್ಷೆಗೆ ಸಿದ್ಧ : ಸ್ವಾತಿ ಮಲಿವಾಲ್

https://youtu.be/s8Qmmx3TVPU?si=y9ZBWY5mTKOSSbyI

ಬಳಿಕ ಇದು ಒಂದು ಪವಾಡ ಎಂದು ನಂಬಿ ಪೋಷಕರು ಮಗುವನ್ನು ದರ್ಗಾಕ್ಕೆ ಕರೆದುಕೊಂಡು ಹೋದರು. ಸದ್ಯ ಮಗಿವಿಗೆ ಇಳಕಲ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಇದನ್ನೂ ಓದಿ: ಬೆಂಗಳೂರು, ಹಾಸನ, ಕೊಡಗು ಸೇರಿದಂತೆ ಹಲವೆಡೆ ಇಂದು ಮಳೆ ಸಾಧ್ಯತೆ

Share with Friends
author avatar
News Desk