Latestಬೆಂಗಳೂರು-Bengaluruರಾಜಕೀಯ | Politicsರಾಜ್ಯ-Karnataka

ಪ್ರಜ್ವಲ್ ರೇವಣ್ಣ ಹಾಸನದಲ್ಲಿ ಗೆದ್ರೆ ಖಂಡಿತ ಅನರ್ಹ ಮಾಡುತ್ತೇವೆ: ಆರ್. ಅಶೋಕ್

ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) , ಬಿಜೆಪಿ (BJp) ವಿರುದ್ಧ ಕಾಂಗ್ರೆಸ್ (Congress) ನಾಯಕರು ಮುಗಿಬಿದ್ದಿದ್ದಾರೆ. ಒಂದುವೇಳೆ ಪ್ರಜ್ವಲ್ ರೇವಣ್ಣ ಅವರು ಹಾಸನದಲ್ಲಿ ಗೆದ್ದರೆ ಖಂಡಿತ ಅನರ್ಹ ಮಾಡುತ್ತೇವೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ (R. Ashok) ತಿರುಗೇಟು ನೀಡಿದ್ದಾರೆ.

ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, 2019ರ ಲೋಕಸಭಾ ಚುನಾವಣೆಯಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಅವರು ಪ್ರಜ್ವಲ್ ರೇವಣ್ಣರನ್ನು ಪಕ್ಕದಲ್ಲೇ ಕೂರಿಸ್ಕೊಂಡು ಪ್ರಚಾರ ಮಾಡಿದ್ರು. ಹಾಸನ ಅಭಿವೃದ್ಧಿಗೆ ಪ್ರಜ್ವಲ್ ರೇವಣ್ಣರನ್ನು ಗೆಲ್ಲಿಸಿಕೊಡಿ ಎಂದು ಮನವಿ ಮಾಡಿದ್ದಾರೆ. ಯಂಗ್ ಲೀಡರ್, ವಿಜನ್ ಲೀಡರ್ ಎಂದು ಸಿದ್ದರಾಮಯ್ಯ ಆ ಸಂದರ್ಭದಲ್ಲಿ ಹೇಳಿದ್ದಾರೆ. 2019ರಲ್ಲಿ ಸಿದ್ದರಾಮಯ್ಯ, ಹೆಚ್.ಡಿ ದೇವೇಗೌಡರು ಪ್ರಜ್ವಲ್ ಪರ ಜಂಟಿ ಪ್ರಚಾರ ಮಾಡಿದ್ದ ವಿಡಿಯೋವನ್ನು ಆರ್. ಅಶೋಕ್ ಅವರು ಬಿಡುಗಡೆ ಮಾಡಿದ್ದಾರೆ. ಇದರ ಜೊತೆಗೆ ಬಿಜೆಪಿ, ಜೆಡಿಎಸ್ ಮೈತ್ರಿ ಮುಂದುವರಿಕೆಯ ಬಗ್ಗೆಯೂ ಅಶೋಕ್ ಸ್ಫೋಟಕ ಸುಳಿವು ಬಿಟ್ಟುಕೊಟ್ಟಿದ್ದಾರೆ. ಇದನ್ನೂ ಓದಿ: ಜೆಪಿ ನಡ್ಡಾ ವಿರುದ್ಧ ಬೆಂಗಳೂರಿನಲ್ಲಿ FIR ದಾಖಲು

https://youtu.be/HPmXeEmh748?si=-gqgC3as97W8arOT

ಜೆಡಿಎಸ್ ಈಗಾಗಲೇ ಪ್ರಜ್ವಲ್ ರೇವಣ್ಣರನ್ನು ಪಕ್ಷದಿಂದ ಅಮಾನತು ಮಾಡಿದೆ. ಭೂಮಿಯಲ್ಲಿ ಇದ್ದಾಗ ಪ್ರಜ್ವಲ್ ಅವರನ್ನು ಬಿಟ್ಟಿದ್ದಾರೆ. ರಾಜ್ಯದ ಗುಪ್ತಚರ ಇಲಾಖೆ ಏನು ಮಾಡ್ತಿತ್ತು. ಪೋಲೀಸರು ಪತ್ರ ಬರೆಯಬೇಕಿತ್ತು, ಕೇಂದ್ರಕ್ಕೆ ಪತ್ರ ಕೂಡ ಬರೆದಿಲ್ಲ. ಇನ್ನು ಪಾತಾಳದಿಂದ ಹೇಗೆ ಹಿಡಿದು ತರ್ತಾರೆ. ತಪ್ಪು ಯಾರದು? ಯಾವುದೇ ಸರ್ಕಾರ ಇದ್ರೂ ಡಿಪ್ಲಾಮ್ಯಾಟಿಕ್ ಪಾಸ್‌ಪೋರ್ಟ್ ಬರುತ್ತದೆ. ಪ್ರಧಾನಿ ನರೇಂದ್ರ ಮೋದಿಯವರು ಪಾಸ್ ಪೋರ್ಟ್ ನೀಡಿಲ್ಲ ಎಂದು ಬಿಜೆಪಿ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಎಚ್‌ಡಿಕೆ-ಅಮಿತ್ ಶಾ ತಡರಾತ್ರಿ ಸಭೆ; ಬಿಜೆಪಿ-ಜೆಡಿಎಸ್ ಮೈತ್ರಿ ಅಲುಗಾಟದ ಮಧ್ಯೆ ಮಹತ್ವದ ಭೇಟಿ

https://youtu.be/8r8XkFbaG34?si=ExLKG0ta9-C9qN3a

ಹೆಚ್.ಡಿ ರೇವಣ್ಣ ಅವರನ್ನು ಬಂಧಿಸಿರುವ ಪೋಲೀಸರ ಕ್ರಮ ಸರಿಯಾಗಿದೆ. ರೇವಣ್ಣ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಮೈತ್ರಿ ಮುಂದುವರಿಸುವ ಬಗ್ಗೆ ಕೇಂದ್ರ ನಾಯಕರ ಜೊತೆಗೆ ಚರ್ಚೆ ನಡೆಯುತ್ತಿದೆ. 2-3 ದಿನಗಳಲ್ಲಿ ಈ ಬಗ್ಗೆ ಗೊತ್ತಾಗುತ್ತದೆ. ಮೈತ್ರಿ ದೆಹಲಿ ಮಟ್ಟದಲ್ಲಿ ಆಗಿರೋದು. ಕೇಂದ್ರೀಯ ಸಂಸದೀಯ ಮಂಡಳಿ ಈ ಬಗ್ಗೆ ತೀರ್ಮಾನ ಮಾಡುತ್ತದೆ ಎಂದರು. ಇದನ್ನೂ ಓದಿ: ರೇವಣ್ಣ ವಿರುದ್ಧ ಕಿಡ್ನ್ಯಾಪ್ ಪ್ರಕರಣ: SIT ಗೆ ಸರಿಯಾಗಿ ಸ್ಪಂದಿಸದ ಸಂತ್ರಸ್ತೆ

https://youtu.be/M2KHexb54ZM?si=DE9FgkZsn435QTn8
Share with Friends
author avatar
News Desk