Crime NewsLatestಚಿತ್ರದುರ್ಗ-Chitradurgaರಾಜ್ಯ-Karnataka

ನ್ಯಾಯಲಕ್ಕೆ ಶರಣಾದ ಚಿತ್ರದುರ್ಗದ ಮುರುಘಾ ಶ್ರೀ

ಚಿತ್ರದುರ್ಗ: ಫೋಕ್ಸೋ ಪ್ರಕರಣ ಸಂಬಂಧ ಮುರುಘಾ (Muruga) ಮಠದ ಸ್ವಾಮೀಜಿ ಅವರ ಜಾಮೀನನ್ನು ಇತ್ತಿಚೆಗೆ ಸುಪ್ರೀಂ ಕೋರ್ಟ್ ರದ್ದುಗೊಳಿಸುವ ಮೂಲಕ ಒಂದು ವಾರದಲ್ಲಿ ನ್ಯಾಯಾಂಗ ಬಂಧನಕ್ಕೆ ತೆರಳುವಂತೆ ಸೂಚನೆ ನೀಡಿತ್ತು. ಈ ಹಿನ್ನೆಲೆ ಚಿತ್ರದುರ್ಗದ 1 ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್‌ಗೆ ಮುರುಘಾ ಶ್ರೀ(Murugha Sri) ಇಂದು ಶರಣಾಗಿದ್ದಾರೆ. ಮೇ 27 ಕ್ಕೆ ವಿಚಾರಣೆ ನಿಗದಿಗೊಳಿಸಿ ಕೋರ್ಟ್ ( Court) ಆದೇಶ ಹೊರಡಿಸಿದೆ.

ಇತ್ತೀಚೆಗೆ ಜಾಮೀನು ರದ್ದುಗೊಳಿಸಿದ್ದ ಸುಪ್ರೀಂಕೋರ್ಟ್‌ (Supreme Court) ನಾಲ್ಕು ತಿಂಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿತ್ತು. ಒಂದು ವಾರದಲ್ಲಿ ನ್ಯಾಯಾಂಗ ಬಂಧನಕ್ಕೆ ತೆರಳುವಂತೆ ಸೂಚನೆ ಕೂಡ ನೀಡಿತ್ತು. ಜೊತೆಗೆ ವಿಶೇಷ ಕರ‍್ಟ್​ನಲ್ಲಿ ಸಂತ್ರಸ್ತ ಮಕ್ಕಳ ವಿಚಾರಣೆಗೆ ‘ಸುಪ್ರೀಂ’ ಆದೇಶಿಸಿತ್ತು. ಇನ್ನು 4 ತಿಂಗಳಲ್ಲಿ ತನಿಖೆ ಪೂರ್ಣಗೊಳ್ಳದಿದ್ದರೆ ಬಂಧನದ ಅವಧಿಯನ್ನು ಇನ್ನೆರಡು ತಿಂಗಳ ಕಾಲ ವಿಸ್ತರಣೆ ಮಾಡಬಹುದಾಗಿದೆ. ಇದನ್ನೂ ಓದಿ: ರಾಹುಲ್ ಜನರಿಗಾಗಿ ಭಾರತ್ ಜೋಡೋ ಯಾತ್ರೆ ನಡೆಸಿದ್ದಾರೆ, ಯುವಕರಿಗೆ ಆದರ್ಶ: ರೇವಂತ್ ರೆಡ್ಡಿ

https://youtu.be/BNwwXuWwJxU?si=VBoIJFKbsL1uZF3D

2022ರ ಅಕ್ಟೋಬರ್ 13ರಂದು ಮುರುಘಾ ಸ್ವಾಮೀಜಿ ವಿರುದ್ಧ 2ನೇ ಪೋಕ್ಸೋ ಕೇಸ್ ದಾಖಲಾಗಿತ್ತು. ಮೈಸೂರಿನ ನಜರಾಬಾದ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಆ ಎರಡನೇ ಪೋಕ್ಸೋ ಕೇಸ್​ ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ವರ್ಗಾವಣೆ ಆಗಿತ್ತು. ಎರಡೂ ಕೇಸ್​ನಲ್ಲಿ ಚಿತ್ರದುರ್ಗ ಕೋರ್ಟ್‌ ಸ್ವಾಮೀಜಿಗೆ ಜಾಮೀನು ನಿರಾಕರಿಸಿತ್ತು. ಹೀಗಾಗಿ ಜಾಮೀನಿಗಾಗಿ ಮುರುಘಾ ಸ್ವಾಮೀಜಿ ಹೈಕೋರ್ಟ್‌ ​ ಮೊರೆ ಹೋಗಿದ್ದರು. ಇದನ್ನೂ ಓದಿ: ಅನಾರೋಗ್ಯದ ಹಿನ್ನೆಲೆ ಮಾಜಿ ಸಿಎಂ ಎಸ್.ಎಂ ಕೃಷ್ಣ ಆಸ್ಪತ್ರೆಗೆ ದಾಖಲು

https://youtu.be/hUI_GuBNXgY?si=ejkKqwZxp6U549Dr

ಹೈಕೋರ್ಟ್‌ನಿಂದ ​ 1ನೇ ಪೋಕ್ಸೋ ಕೇಸ್​ನಲ್ಲಿ ಮುರುಘಾಶ್ರೀಗೆ ಬೇಲ್​ ಸಿಕ್ಕಿತ್ತು. ನವೆಂಬರ್​ 16 ರಂದು ಹೈಕೋರ್ಟ್‌ ​ ಮುರುಘಾಶ್ರೀಗೆ 7 ಷರತ್ತುಗಳು ಹಾಕಿ ಜಾಮೀನು ನೀಡಿತ್ತು. ಬಂಧನವಾಗಿ ಬರೋಬ್ಬರಿ 441 ದಿನಗಳ ಬಳಿಕ ಮುರುಘಾ ಸ್ವಾಮೀಜಿ ರಿಲೀಸ್​ ಆಗಿದ್ದರು. ಬಿಡುಗಡೆ ಬಳಿಕ ದಾವಣಗೆರೆಯ ವಿರಕ್ತ ಮಠದಲ್ಲಿ ಸ್ವಾಮೀಜಿ ವಾಸ್ತವ್ಯ ಹೂಡಿದ್ದರು. ಇದನ್ನೂ ಓದಿ: ನೂರಾರು ಮಹಿಳೆಯರ ಬದುಕು ಹಾಳು ಮಾಡಿದ ನಾಯಕನ ಬಗ್ಗೆ ಏಕೆ ಮೌನವಾಗಿದ್ದೀರಿ: ಪ್ರಿಯಾಂಕಾ ಗಾಂಧಿ

https://youtu.be/tEV71sOEnV8?si=p8BlD9UKMWUaMwCv
Share with Friends
author avatar
News Desk