Latestಚುನಾವಣೆ-Electionಬೆಂಗಳೂರು ಗ್ರಾಮಾಂತರರಾಜ್ಯ-Karnataka

ಕೈ ಅಭ್ಯರ್ಥಿ ಡಿ.ಕೆ ಸುರೇಶ್ ಆಪ್ತನ ಮನೆ ಮೇಲೆ ಐಟಿ ದಾಳಿ

ಬೆಂಗಳೂರು: ಲೋಕಸಭಾ ಚುನಾವಣೇ ಹೊತ್ತಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಐಟಿ ದಾಳೆ ಮುಂದುವರೆದಿದ್ದು, ಬೆಂಗಳೂರು ಗ್ರಾಮಾಂತರ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ ಸುರೇಶ್ ಆಪ್ತನ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ಬೆಂಗಳೂರಿನ ವಾಜರಹಳ್ಳಿಯಲ್ಲಿ ಐಟಿ ಅಧಿಕಾರಿಗಳು ಇಂದು ಬೆಳಗ್ಗೆ ದಾಳಿ ನಡೆಸಿದ್ದಾರೆ. ಡಿ,ಕೆ ಸುರೇಶ್ ಬಳಿ ಡ್ರೆöÊವರ್ ಆಗಿದ್ದ ರಘು ಮನೆಯಲ್ಲಿ ಪರಿಶೀಲನೆ ನಡೆಸಿದರು. ಬಳಿಕ ಗಣಪತಿಪುರದಲ್ಲಿರುವ ಮನೆ ಮೇಲೂ ದಾಳಿ ಮಾಡಿದ್ದು, ಮನೆಯಲ್ಲಿ ಪರಿಶೀಲನೆ ನಂತರ ದಾಳಿಯನ್ನು ಮುಕ್ತಾಯಗೊಳಿಸಿದರು. ಇದನ್ನೂ ಓದಿ: ಪ್ರಧಾನಿ ಮೋದಿ ಏಪ್ರಿಲ್ 20ರಂದು ಮತ್ತೆ ಕರ್ನಾಟಕಕ್ಕೆ

https://youtu.be/p09jsXwn8nA?si=eDNgz0Rvbqrc5ZtK
Share with Friends
author avatar
News Desk