LatestTop Storiesಕಲಬುರಗಿ-Kalaburagiಬೆಂಗಳೂರು-Bengaluru

ಬಿಜೆಪಿ ಪಾದಯಾತ್ರೆಗೆ ಪ್ರಿಯಾಂಕ್ ಖರ್ಗೆ ವ್ಯಂಗ್ಯ – ‘ನಾಯಕತ್ವ ಉಳಿಸಿಕೊಳ್ಳೋಕೆ ಹೋರಾಟ’

ಕಲಬುರಗಿ / ಬೆಂಗಳೂರು: ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ನಡೆಸುತ್ತಿರುವ ಪಾದಯಾತ್ರೆಗೆ ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಗಿ ತಿರುಗೇಟು ನೀಡಿದ್ದಾರೆ.

‘ಪಾದಯಾತ್ರೆ ಮಾಡಲಿ, ಯಾರು ಬೇಡ ಎಂದವರು’ಎಂದು ಲೇವಡಿ ಮಾಡಿದ ಪ್ರಿಯಾಂಕ್ ಖರ್ಗೆ, ಬಿಜೆಪಿ ನಾಯಕರ ನಾಟಕವನ್ನು ಟೀಕಿಸಿದ್ದಾರೆ.

‘ಶಾಸಕ ಚಂದ್ರು ಲಮಾಣಿ ಮೇಲೆ ಲೋಕಾ ರೇಡ್ ಆಗಿತ್ತು, ಶಾಸಕ ಚಂದ್ರು ಲಮಾಣಿ ಅವರನ್ನು ಕೈಬಿಟ್ಟಿದ್ದಾರಾ?’ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ. ತಮ್ಮದೇ ಶಾಸಕರ ಮೇಲಿನ ಭ್ರಷ್ಟಾಚಾರ ಆರೋಪದ ಬಗ್ಗೆ ಬಿಜೆಪಿ ಮೌನವಾಗಿರುವುದೇಕೆ ಎಂದು ಅವರು ಕುಟುಕಿದ್ದಾರೆ.

‘ಯಾಕೆ ಬಿಜೆಪಿಯವರು ಸದನದಲ್ಲಿ ಚರ್ಚೆ ಮಾಡ್ತಿಲ್ಲ?’ಎಂದು ಪ್ರಶ್ನಿಸಿದ ಸಚಿವರು, ಸದನದಲ್ಲಿ ಚರ್ಚೆ ಮಾಡಿದರೆ ಸತ್ಯಾಂಶ ಹೊರಬರುತ್ತದೆ ಎಂಬ ಭಯ ಬಿಜೆಪಿಗಿದೆ ಎಂದು ಆರೋಪಿಸಿದರು.

ಬಿಜೆಪಿ ನಾಯಕರ ಈ ಪಾದಯಾತ್ರೆ ಜನರಿಗಾಗಿ ಅಲ್ಲ, ‘ನಾಯಕತ್ವ ಉಳಿಸಿಕೊಳ್ಳೋಕೆ ಹೋರಾಟ ಮಾಡ್ತಿದ್ದಾರೆ’ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

‘ಅಧ್ಯಕ್ಷರಾಗಿ ವಿಜಯೇಂದ್ರ ಉಳಿಯುವ ಹೋರಾಟ, ವಿಪಕ್ಷ ನಾಯಕನಾಗಿ ಆರ್.ಅಶೋಕ್ ಉಳಿಯುವ ಹೋರಾಟ’ ಇದಾಗಿದೆ ಎಂದು ಬಿಜೆಪಿ ಪಾದಯಾತ್ರೆಗೆ ಪ್ರಿಯಾಂಕ್ ತಿರುಗೇಟು ನೀಡಿದ್ದಾರೆ.

Share with Friends
author avatar
Digital Desk