Crime NewsLatestTop Storiesಬೆಂಗಳೂರು-Bengaluru

ಬಾಂಗ್ಲಾ ದಂಪತಿ ಹಲ್ಲೆ ಆರೋಪ : ವೈದ್ಯನ ಬಂಧನ

ಬೆಂಗಳೂರು,ಜು.27: ಬಾಂಗ್ಲಾ ಮೂಲದ ದಂಪತಿ ಮೇಲೆ ವೈದ್ಯರೊಬ್ಬರು ಹಲ್ಲೆ ನಡೆಸಿರುವ ಘಟನೆ ಸರ್ಜಾಪುರದ ಬಳಿ ನಡೆದಿದೆ.

ಸಾಮಾಜಿಕ ಹೋರಾಟಗಾರ ಪುನೀತ್ ಕೆರೆಹಳ್ಳಿ ಸಹಚರನಾಗಿರುವ ನಾಗೇಂದ್ರ ಎಂಬಾತ ಬಂಧಿತ ವೈದ್ಯನಾಗಿದ್ದು,ಈತ ನಸ್ರಿನಾ ಬಿಲಾಲ್, ಮಹಮ್ಮದ್ ಬಿಲಾಲ್ ಎಂಬ ಬಾಂಗ್ಲಾ ದಂಪತಿ ದಂಪತಿ ಮೇಲೆ ಹಲ್ಲೆ ನಡೆಸಿದ್ದಾನೆಂದು ಆರೋಪಿಸಲಾಗಿದೆ.

ಸರ್ಜಾಪುರದ ಬಳಿ ತೆರಳುತ್ತಿದ್ದ ದಂಪತಿಯನ್ನು ನಿಂದಿಸಿ ಪೌರತ್ವದ ಬಗ್ಗೆ ಪ್ರಶ್ನೆ ಮಾಡಿ ಇಬ್ಬರ ಮೇಲೂ ವೈದ್ಯ ಹಲ್ಲೆ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದ್ದು,ಈ ಸಂಬಂಧ ಈ ಕುರಿತು ದಂಪತಿ ಬೆಳ್ಳಂದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.ಈ ದೂರಿನ ಹಿನ್ನೆಲೆಯಲ್ಲಿ ಬೆಳ್ಳಂದೂರು ಪೊಲೀಸರು ವೈದ್ಯ ನಾಗೇಂದ್ರನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share with Friends
author avatar
Digital Desk