Latestದಕ್ಷಿಣ ಕನ್ನಡ-Dakshina Kannada

ಗುಬ್ಬಿ ತಾಲ್ಲೂಕಿನಲ್ಲಿ ಮಳೆಗಾಗಿ ಕತ್ತೆಗಳ ಅದ್ದೂರಿ ಮದುವೆ..!

ಗುಬ್ಬಿ: ತಾಲೂಕಿನಲ್ಲಿ ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಕಂಗಾಲಾಗಿರುವ ರೈತರು, ಉತ್ತಮ ಮಳೆಯಾಗಲಿ ಎಂಬ ನಂಬಿಕೆಯಿಂದ ಕತ್ತೆಗಳ ಅದ್ದೂರಿ ಮದುವೆ ನೆರವೇರಿಸಿ ವಿಶಿಷ್ಟವಾಗಿ ಪ್ರಾರ್ಥಿಸಿದರು.
​ಗುಬ್ಬಿ ತಾಲ್ಲೂಕಿನ ಚೇಳೂರು ಹೋಬಳಿಯ ಕಚ್ಚೇನಹಳ್ಳಿ ಹಾಗೂ ಹಾಗಲವಾಡಿ ಹೋಬಳಿಯ ಯರಬಳ್ಳಿ ಗ್ರಾಮಗಳಲ್ಲಿ ಗ್ರಾಮಸ್ಥರು ಚಂದಾ ಸಂಗ್ರಹಿಸಿ, ಗಂಡು ಮತ್ತು ಹೆಣ್ಣು ಕತ್ತೆಗಳಿಗೆ ಸಾಂಪ್ರದಾಯಿಕವಾಗಿ ಕಲ್ಯಾಣೋತ್ಸವ ಮಾಡಿಸಿದರು.

ಗುಬ್ಬಿ ತಾಲ್ಲೂಕಿನಲ್ಲಿ ಮಳೆಗಾಗಿ ಕತ್ತೆಗಳ ಅದ್ದೂರಿ ಮದುವೆ

​ಗಂಡು ಕತ್ತೆಗೆ ಪಂಚೆ-ಟವೆಲ್ ಹಾಗೂ ಹೆಣ್ಣು ಕತ್ತೆಗೆ ಹಸಿರು ಸೀರೆ ಉಡಿಸಿ, ಬಳೆ ತೊಡಿಸಿ ಗ್ರಾಮದಲ್ಲಿ ಮೆರವಣಿಗೆ ನಡೆಸಲಾಯಿತು. ಬಳಿಕ ಮಂಗಳಸೂತ್ರ ಧಾರಣೆ, ಆರತಿ ಬೆಳಗುವುದು, ಅಕ್ಷತೆ ಹಾಕುವುದು ಹಾಗೂ ಸಿಹಿ ಊಟದ ವ್ಯವಸ್ಥೆ ಸೇರಿದಂತೆ ಎಲ್ಲಾ ಶಾಸ್ತ್ರೋಕ್ತ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಈ ಸಾಂಪ್ರದಾಯಿಕ ಆಚರಣೆಯಿಂದ ಮಳೆ ಸುರಿಯಲಿದೆ ಎಂಬ ದೃಢ ನಂಬಿಕೆಯೊಂದಿಗೆ ಗ್ರಾಮಸ್ಥರು ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

Share with Friends
author avatar
Digital Desk