LatestTop Storiesರಾಷ್ಟ್ರೀಯ-Nationalವಿದೇಶ-International

ವಿಯೆಟ್ನಾಂನಲ್ಲಿ ಪ್ರವಾಸಿ ದೋಣಿ ಪಲ್ಟಿ,15 ಮಂದಿ ಸಾವು

ವಿಯೆಟ್ನಾಂ,ಜು.11: ವಿಯೆಟ್ನಾಂನ ಫು ಕ್ವಾಕ್ ದ್ವೀಪದ ಬಳಿ ಪ್ರವಾಸಿ ದೋಣಿ ಪಲ್ಟಿಯಾಗಿದ್ದು, ಭಾರತೀಯರು ಸೇರಿ 15 ಮಂದಿಸಾವು ಕಂಡಿರುವ ಮಾಹಿತಿ ಹೊರಬಿದ್ದಿದೆ.
ಸದ್ಯ ವಿಯೆಟ್ನಾಂನ ಅತಿದೊಡ್ಡ ದ್ವೀಪವಾದ ಫು ಕ್ವಾಕ್‌ನ ಹಾನ್ ಮೇ ರುಟ್ ನ್ಗೋಯ್ ಬಳಿ 32 ಭಾರತೀಯ ಪ್ರವಾಸಿಗರು ಮತ್ತು 4 ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ದೋಣಿ ಮುಳುಗಿದೆ.ತಕ್ಷಣ ವಿಷಯ ತಿಳಿದ ಸ್ಥಳೀಯ ಅಧಿಕಾರಿಗಳು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸಿದ್ದು, ದೋಣಿಯಲ್ಲಿ ಪ್ರಯಾಣಿಸುತ್ತಿದ್ದವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
ಇನ್ನು ಭಾರತೀಯ ರಾಯಭಾರ ಕಚೇರಿಯು ಸ್ಥಳೀಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿದ್ದು,ಘಟನೆಯ ಸಂಪೂರ್ಣ ವಿವರಗಳನ್ನು ಪಡೆಯುತ್ತಿದೆ.ಅಲ್ಲದೆ,ಹೋ ಚಿ ಮಿನ್ಹ್ ನಗರದಲ್ಲಿ ನಿಯಂತ್ರಣ ಕೊಠಡಿ ತೆರೆದಿದೆ.

Share with Friends
author avatar
Digital Desk