BlogLatestರಾಜ್ಯ-Karnatakaವಿಜಯಪುರ-Vijayapura

ಶಾಲೆಯ ಮಕ್ಕಳಿಗೆ ಕ್ಷೇತ್ರ ಭೇಟಿ ಪ್ರವಾಸಕ್ಕೆ ಶಾಸಕ ಚಿಮ್ಮನಕಟ್ಟಿ ಚಾಲನೆ

ಬಾದಾಮಿ: ತಾಲೂಕಿನ ಕರಡಿಗುಡ್ಡ ಎಸ್.ಎನ್.ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಪಿಎಂ ಶ್ರೀ ಯೋಜನೆಯಡಿ ಕ್ಷೇತ್ರ ಭೇಟಿ/ಅನುಭವಾತ್ಮಕ ಶೈಕ್ಷಣಿಕ ಪ್ರವಾಸಕ್ಕೆ ಶಾಸಕ ಭೀಮಸೇನ ಚಿಮ್ಮನಕಟ್ಟಿ ಹಸಿರು‌ ನಿಶಾನೆ ತೋರಿಸುವುದರ ಮೂಲಕ ಚಾಲನೆ ನೀಡಿದರು.

ದೇಶ ಸುತ್ತು ಕೋಶ ಓದು ಎಂಬ ನಾಣ್ಣುಡಿಯಂತೆ ಮಕ್ಕಳು ಪ್ರವಾಸದ ಮೂಲಕ ಜ್ಞಾನ ಪಡೆಯಬೇಕು ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಶಂಕರ ಕನಕಗಿರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಕೇಶವ ವಾಮನ ಪೆಟ್ಲೂರ, ದೈಹಿಕ ಶಿಕ್ಷಣ ಪರಿವೀಕ್ಷಕ ಬಸವರಾಜ ಹಳಗೇರಿ, ಶಿಕ್ಷಣ ಸಂಯೋಜಕರಾದ ಬಿ.ಕೆ.ಚಿಮಲ್, ಭಿ.ಟಿ.ಹಳ್ಳಿ, ಸಮೂಹ ಸಂಪನ್ಮೂಲ ವ್ಯಕ್ತಿ ಎಸ್.ಎಚ್.ಕೊನೇರಿ, ಪ್ರೌಢಶಾಲೆ ಮುಖ್ಯಶಿಕ್ಷಕ ಉಜ್ವಲ ಬಸರಿ, ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಬಿ.ಎಸ್.ಕಟಗಿ, ಎಸ್.ಡಿ.ಎಂ.ಸಿ.ಅಧ್ಯಕ್ಷ ಗೂಳಪ್ಪ ಮಣ್ಣೂರ ಸೇರಿದಂತೆ ಸದಸ್ಯರು ಇತರರು ಹಾಜರಿದ್ದರು.

ಕರಡಿಗುಡ್ಡ ಎಸ್.ಎನ್.ಶಾಲೆಯ 180 ಶಾಲಾ ಮಕ್ಕಳು ಧಾರವಾಢ ವಿಜ್ಞಾನ ಕೇಂದ್ರ, ಕೃಷಿ ವಿವಿ ಗಳಿಗೆ ಒಂದು ದಿನದ ಪ್ರವಾಸ ಕೈಗೊಂಡರು.

Share with Friends
author avatar
News Desk