BlogLatestರಾಜ್ಯ-Karnataka

ವಕ್ಫ್ ವಿರುದ್ಧ ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಅಖಂಡ ಕರ್ನಾಟಕ ರೈತ ಸಂಘ

ಬೆಂಗಳೂರು : ವಕ್ಫ್ ಬೋರ್ಡ್ ರಾಜ್ಯದ ರೈತರು ಅಷ್ಟೇ ಅಲ್ಲ ದೇಶಾದ್ಯಂತ ರೈತರ ಭೂಮಿಗಳನ್ನು ನುಂಗುವ ಹುನ್ನಾರ ನಡೆಸಿದ್ದೇ. ಇದಕ್ಕೆ ರಾಜ್ಯ ಸರ್ಕಾರ ಕುಮಕ್ಕು ನೀಡುತ್ತಿದೆ ಇದರ ವಿರುದ್ಧ ಉಗ್ರ ಹೋರಾಟ ಮಾಡುವುದಾಗಿ ಅಖಂಡ ಕರ್ನಾಟಕ ರೈತ ಸಂಘ ಎಚ್ಚರಿಕೆ ನೀಡಿತು.

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಾಧ್ಯಕ್ಷ ಸಿದ್ದನಗೌಡ ಪಾಟೀಲ್, ಇತ್ತೀಚಿಗೆ ವಕ್ಸ್ ಬೋರ್ಡ್, ನೂರಾರು ವರ್ಷಗಳಿಂದ ಉಳಿಮೆ ಮಾಡಿ ಬದುಕು ಕಟ್ಟಿಕೊಳ್ಳುತ್ತಿರುವ ರೈತರ ಆಸ್ತಿಯನ್ನು ಕಬಳಿಸುವ ಪ್ರಯತ್ನ ಮಾಡುತ್ತಿದೆ ಇದಕ್ಕೆ ಸಿದ್ದರಾಮಯ್ಯನವರ ಸರ್ಕಾರ ಕಿಮ್ಮಕ್ಕು ನೀಡುತ್ತಿದೆ ಇದರ ವಿರುದ್ಧ ಕ್ರಾಂತಿಕಾರಿ ಹೋರಾಟ ಮಾಡಬೇಕಾಗುತ್ತದೆ ಎಂದು ಗುಡುಗಿದರು

ರೈತರ ಜಮೀನುಗಳು ಇತ್ತೀಚಿಗೆ ಬಂದವುಗಳಲ್ಲ. ನಾಲ್ಕಾರು ತಲೆಮಾರುಗಳಿಂದ ವಾರ್ಸಾ ನಾತೆಯಿಂದ ಬಂದಂತಹ ಜಮೀನುಗಳಾಗಿವೆ. ಇಂತಹ ಜಮೀನುಗಳನ್ನು ವಕ್ಸ್ ಬೋರ್ಡನವರು ನಮ್ಮ ವಕ್ಸ್ಗೆ. ಸಂಬಂಧಿಸಿವೆ ಎಂದು ಹೇಗೆ ಹೇಳುತ್ತಾರೆ. ನಮ್ಮ ಅಮೀನುಗಳು ಎಂದು ಹೇಳಲು ನಕ್ಸ್ ಮಂಡಳಿಯವರ ಬಳಿ ಯಾವ ದಾಖಲೆಗಳವೆ ಎಂಬುದು ಬಹಿರಂಗ ಪಡಿಸಲಿ ಏಕಾಏಕಿ ರಾಜ್ಯದ ಕೆಲವೊಂದು ರೈತರಿಗೆ ಯಾವುದೇ ಮುನ್ಸೂಚನೆ ಇಲ್ಲದೆ ತಿಳುವಳಿಕೆ ಪತ್ರವು ಕೂಡಾ ಕೊಡದೇ ನೇರವಾಗಿ ಪಹಣಿ ಕಾಲಂ 11 ರಲ್ಲಿ ಕರ್ನಾಟಕ ವಕ್ಸ್ ಬೋರ್ಡ ಮಸಜಿದ್ ಸುನ್ನಿ ಎಂದು ದಾಖಲು ಮಾಡಿದ್ದಾರೆ.

ಕೆಲವು ಭಾಗದಲ್ಲಿ ನೋಟಿಸ್ ಮಾತ್ರ ಕೊಟ್ಟು ಹೆದರಿಸಲು ನೋಡಿದ್ದಾರೆ. ರೈತರ ಜಮೀನುಗಳು ವಕ್ಸ್ ಗೆ ಸಂಬಂಧ ಪಟ್ಟವೆ ಎಂದು ಮೊದಲು ದಾಖಲೆಗಳನ್ನು ಕೊಡಲ, 1974ರಲ್ಲಿ ಗೆಜೆಟ್ ನೋಟಿಪಿಕೇಶನ್ ಹೊರಡಿಸಬೇಕಾದರೆ ವಕ್ಫ್ ಸಂಬಂಧಿಸಿದ ಯಾವ ಜಮೀನುಗಳ ದಾಖಲೆ ಕೊಟ್ಟು ಗೆಜೆಟ್ ಹೊರಡಿಸಲಾಗಿದೆ.

ಯಾವುದಕ್ಕೂ ಆಸ್ತಿ ನಮ್ಮದೆಂದು ಹೇಳಬೇಕಾದರೆ ಕಾನೂನು ಬದ್ದು ದಾಖಲೆಗಳಿರಬೇಕು. ಹಿಂದಿನ ಹಿರಿಯರು ವಕ್ಸ್ ಗೆ ದಾನ ಕೊಟ್ಟದ್ದಾರೆಂದು ಹೇಳಲಾಗುತ್ತಿದೆ. ಹಾಗಿದ್ದರೆ ಯಾರು ದಾನ ಕೊಟ್ಟರು ಎಷ್ಟನೇ ಇಸವಿಯಲ್ಲಿ ಅಥವಾ ಎಷ್ಟನೇ ಶತಮಾನದಲ್ಲಿ ದಾನ ಕೊಟ್ಟಿದ್ದಾರೆಂಬುದು ದಾಖಲೆ ಸಮೇತ ನಿರೂಪಿಸಬೇಕು ಎಂದು ಆಗ್ರಹಿಸಿದರು

ಇಲ್ಲ ವಕ್ಸ್ ಎಂದರೆ ಮುಸ್ಲಿಂ ಬಾಂಧವನೊಬ್ಬ ತನ್ನದೆ ಆಸ್ತಿಯನ್ನು “ಅಲ್ಲಾನ” ಹೆಸರಿನಲ್ಲಿ ಭಕ್ತಿ ಭಾವನೆಗಳೊಂದಿಗೆ ಸಮರ್ಪಣೆ ಮಾಡುವ ಆಸ್ತಿಯು ವಕ್ಸ್ ಆಸ್ತಿಯೆಂದಾಗುತ್ತದೆ. ಈ ಸದ್ಯ ವಕ್ಸ್ ಬೋರ್ಡನವರು ತೆಗೆದಿರುವ ಖ್ಯಾತೆಗೆ ಇಲ್ಲಿಯವರೆಗೂ ದೇಶದಲ್ಲಿ ಎಷ್ಟು ಮುಸ್ಲಿಂ ಬಾಂಧವರು ವೆಲ್ಡ್ ಕಮೀಟಿಗೆ ತಮ್ಮ ಸ್ವಂತ ಆಸ್ತಿಗಳನ್ನು ಅಲ್ಲಾನ ಹೆಸರಿನಲ್ಲಿ ವಕ್ಸ್ ಮಂಡಳಿಗೆ ಬಿಟ್ಟುಕೊಟ್ಟದ್ದರ ಬಗ್ಗೆ ದಾಖಲೆ ಸಮೇತ ನಿರೂಪಿಸಲಿ ಎಂದು ಸವಾಲಿಸಿದರು

ಇದೇ ಸಂದರ್ಭದಲ್ಲಿ 1974ರಲ್ಲಿ ಹೊರಡಿಸಿದ ಗೆಜೆಟ್ಟನ್ನು ಸಂಪೂರ್ಣವಾಗಿ ತೊಲಗಿಸಿ ರೈತರನ್ನು ಉಳಿಸಬೇಕಾಗಿ ಕೋರಿದರು. ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ಅರವಿಂದ್ ಕೆ ಕುಲಕರ್ಣಿ, ಪ್ರಕಾಶ್, ಪ್ರಭುಗೌಡ ಪೇಟರೆಡ್ಡಿ ಮುಂತಾದವರು ಉಪಸ್ಥಿತರಿದ್ದರು.

Share with Friends
author avatar
News Desk