BlogLatestಬೆಳಗಾವಿ-Belagaviರಾಜ್ಯ-Karnataka

ತಶೀಲ್ದಾರ್ ಕಛೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕ ರುದ್ರೇಶ ಏಡೆನ್ನವರ್ ಆತ್ಮಹತ್ಯೆ

ಬೆಳಗಾವಿ : ತಶೀಲ್ದಾರ್ ಕಛೇರಿಯಲ್ಲಿ ಎಸ್‌ಡಿಎ ಆಗಿ ಕಾರ್ಯ ನಿರ್ವಹಿಸುತ್ತಿದ್ದ ರುದ್ರೇಶ ಏಡೆನ್ನವರ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದು ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದು ತನಿಖೆ ನಂತರ ತಿಳಿಯುತ್ತದೆ ಎಂದು ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು.

ನಗರದ ಜಿಲ್ಲಾ ಪಂಚಾಯತ್ ಕಚೇರಿ ಎದುರು ರುದ್ರೇಶ್ ಆತ್ಮಹತ್ಯೆ ಪ್ರಕರಣಕ್ಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮದೊಂದಿಗೆ ಮಾತನಾಡಿದವರು ಎಸ್ ಡಿ ಸಿ ರುದ್ರೇಶ್ ಯಾರ ಹೆಸರನ್ನು ಉಲ್ಲೇಖ ಮಾಡಿದರೆ ಅವರನ್ನು ಪೊಲೀಸ್ ತನಕೆಗೆ ಒಳಪಡಿಸುತ್ತಾರೆ ಸಂಪೂರ್ಣ ತನಿಖೆಯಾಗಲಿ ಈ ಕುರಿತು ಆಮೇಲೆ ಮಾತನಾಡುತ್ತೇನೆಂದು ತಿಳಿಸಿದರು.

ಆಪ್ತ ಸಹಾಯಕರು ತಪ್ಪು ಮಾಡಿದರೆ ಸಚಿವರನ್ನು ಹೂಣೆ ಮಾಡಕ್ಕೆ ಆಗಲ್ಲ. ಆತ್ಮಹತ್ಯೆ ಮಾಡಿಕೊಂಡ ರುದ್ರೇಶ್ ಎಲ್ಲಿಯೂ ಯಾವುದೇ ಸಚಿವರ ಹೆಸರು ಉಲ್ಲೇಖಿಸಿಲ್ಲ ಹೀಗಾಗಿ ಯಾರ ಹೆಸರು ಉಲ್ಲೇಖ ಮಾಡಿದ್ದಾನೆ ಅವರನ್ನು ಪೊಲೀಸ್ ತಣಿಕೆಗೆ ಒಳಪಡಿಸುತ್ತಾರೆ ಎಂದರು.

ದಯಾನಂದ ಎಂ. ಬೆಳಗಾವಿ ವರದಿಗಾರರು.

Share with Friends
author avatar
News Desk