BlogEntertainmentLatestಸ್ಯಾಂಡಲ್​ವುಡ್-Sandalwood

ನಟ ರಿಷಭ್‌ ಶೆಟ್ಟಿಗೆ ರಾಷ್ಟ್ರಪತಿಗಳಿಂದ “ಅತ್ಯುತ್ತಮ ನಟ’ ಪ್ರಶಸ್ತಿ ಪ್ರದಾನ

ನವದೆಹಲಿ : 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಮಂಗಳವಾರ ಹೊಸದಿಲ್ಲಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರದಾನ ಮಾಡಿದರು. ಕನ್ನಡಕ್ಕೆ ಈ ಬಾರಿ 7 ಪ್ರಶಸ್ತಿಗಳು ಬಂದಿವೆ. “ಕಾಂತಾರ’ ಸಿನೆಮಾದಲ್ಲಿನ ಅಭಿಯನಕ್ಕಾಗಿ ನಟ ರಿಷಭ್‌ ಶೆಟ್ಟಿ ಗೆ “ಅತ್ಯುತ್ತಮ ನಟ’ ಪ್ರಶಸ್ತಿ ಬಂದಿದೆ.

ಹಾಗೆ ಅತ್ಯುತ್ತಮ ಮನೋರಂಜನೆ ಸಿನೆಮಾ ವಿಭಾಗದಲ್ಲೂ ಈ ಚಿತ್ರ ಪ್ರಶಸ್ತಿ ಪಡೆದುಕೊಂಡಿದೆ. ಪ್ರಾದೇಶಿಕ ಭಾಷೆಗಳ ವಿಭಾಗದಲ್ಲಿ “ಅತ್ಯುತ್ತಮ ಕನ್ನಡ ಸಿನೆಮಾ’ ಪ್ರಶಸ್ತಿಯನ್ನು ಕೆಜಿಎಫ್‌ -2 ಗೆ ಬಂದಿದೆ. ಸಾಹಸ ನಿರ್ದೇಶನಕ್ಕೂ ಕೆಜಿಎಫ್‌ -2 ಪ್ರಶಸ್ತಿ ಬಂದಿದೆ.

ಮಧ್ಯಂತರ ಸಿನೆಮಾಗೆ ಅತ್ಯುತ್ತಮ ಸಂಕಲನ ಪ್ರಶಸ್ತಿಯನ್ನು ಸುರೇಶ್‌ ಅರಸ್‌ ಪಡೆದರೆ, ನಿರ್ದೇಶಕರ ಚೊಚ್ಚಲ ಸಿನೆಮಾಕ್ಕಾಗಿನ ಪ್ರಶಸ್ತಿಯನ್ನು ಈ ಸಿನೆಮಾ ನಿರ್ದೇಶಕ ದಿನೇಶ್‌ ಶೆಣೈ ಪಡೆದಿದ್ದಾರೆ.ಅತ್ಯುತ್ತಮ ಕಲೆ ಮತ್ತು ಸಾಂಸ್ಕೃತಿಕ ಚಲನಚಿತ್ರ ಪ್ರಶಸ್ತಿ’ ರಂಗ ವೈಭೋಗ’ ಸಿನೆಮಾಗೆ ನೀಡಿ ಗೌರವಿಸಲಾಗಿದೆ.

ಕಾಂತಾರ ಹಾಗೂ ಕೆಜಿಎಫ್‌ -2 ರಾಷ್ಟ್ರ ಪ್ರಶಸ್ತಿಗಳ ನಿರ್ಮಾಪಕ ವಿಜಯ್‌ ಕಿರಗಂದೂರು ರಾಷ್ಟ್ರಪತಿ ದ್ರೌಪದಿ ಮುರ್ಮುರಿಂದ ಪ್ರಶಸ್ತಿ ಸ್ವೀಕರಿಸಿದರು.

ವಿಜಯ ಸಂದರ್ಭದಲ್ಲಿ “ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ’ಯನ್ನು ಹಿರಿಯ ನಟ ಮಿಥುನ್‌ ಚಕ್ರವರ್ತಿಯವರಿಗೆ ನೀಡಲಾಯಿತು.

“KGF 2” ಚಿತ್ರಕ್ಕೆ ಎರಡು ರಾಷ್ಟ್ರ ಪ್ರಶಸ್ತಿಗಳು .

ಹೊಂಬಾಳೆ ಫಿಲಂಸ್ ಲಾಂಛನದಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿರುವ, ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಯಶ್ ನಾಯಕರಾಗಿ ನಟಿಸಿದ್ದ ಜಗತ್ತೇ ಮೆಚ್ಚಿದ ಜನಪ್ರಿಯ ಚಿತ್ರ “ಕೆ.ಜಿ.ಎಫ್ ೨”. 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಈ ಚಿತ್ರಕ್ಕೆ ಅತ್ಯುತ್ತಮ ಕನ್ನಡ ಚಿತ್ರ ಹಾಗೂ ಈ ಚಿತ್ರದ ಸಾಹಸ ನಿರ್ದೇಶಕ ಅನ್ವರಿವು ಅವರಿಗೆ ಅತ್ಯುತ್ತಮ ಸಾಹಸ ಸಂಯೋಜನೆಗಾಗಿ ರಾಷ್ಟ್ರ ಪ್ರಶಸ್ತಿ ಬಂದಿದೆ.

ದೆಹಲಿಯಲ್ಲಿ ನಡೆದ 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಹೊಂಬಾಳೆ ಫಿಲಂಸ್ ನ ಶೈಲಜಾ ವಿಜಯ್ ಕುಮಾರ್ ಹಾಗೂ ಸಾಹಸ ನಿರ್ದೇಶಕ ಅನ್ಬರಿವು ಪ್ರಶಸ್ತಿ ಸ್ವೀಕರಿಸಿದ್ದಾರೆ.

“ಕೆ.ಜಿ.ಎಫ್ ೨” ನಂತಹ ಜನಪ್ರಿಯ ಚಿತ್ರವನ್ನು ನಿರ್ದೇಶಿಸಿದ ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ನಿರ್ಮಾಪಕ ವಿಜಯ್ ಕಿರಗಂದೂರು ಧನ್ಯವಾದ ಹೇಳಿದ್ದಾರೆ .

Share with Friends
author avatar
News Desk