Health | ಆರೋಗ್ಯLatestTop Storiesರಾಜ್ಯ-Karnatakaಹಾಸನ-Hassan

ಡೇಂಜರ್‌ ಡೆಂಗ್ಯೂಗೆ ಹಾಸನದ ಬಾಲಕಿ ಬಲಿ- ಸಾವಿನ ಸಂಖ್ಯೆ 4 ಕ್ಕೆ ಏರಿಕೆ

ಹಾಸನ: ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದ್ದು, ಹಾಸನ ಜೆಲ್ಲೆಯಲ್ಲಿ (Hassan) ಶಂಕಿತ ಡೆಂಗ್ಯೂಗೆ (Dengue) ಮತ್ತೋರ್ವ ಬಾಲಕಿ ಮೃತಪಟ್ಟಿದ್ದಾಳೆ. ಈ ಮೂಲಕ ಜಿಲ್ಲೆಯಲ್ಲಿ ಶಂಕಿತ ಡೆಂಗ್ಯೂವಿನಿಂದ ಮೃತಪಟ್ಟವರ ಸಂಖ್ಯೆ ನಾಲ್ಕಕ್ಕೆ ಏರಿದೆ.

ಹೊಳೆನರಸೀಪುರ (Holenarasipur) ತಾಲ್ಲೂಕಿನ, ದೊಡ್ಡಳ್ಳಿ ಗ್ರಾಮದ ಸಮೃದ್ಧಿ (8) ಎಂದು ಮೃತ ಬಾಲಕಿಯನ್ನು ಗುರುತಿಸಲಾಗಿದೆ. ಬಾಲಕಿ ಗ್ರಾಮದ ರಮೇಶ್-ಅಶ್ವಿನಿ ದಂಪತಿಯ ಪುತ್ರಿಯಾಗಿದ್ದು, ಕಳೆದ 4 ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದಳು. ಇದನ್ನೂ ಓದಿ: ಕರ್ನಾಟಕ ಕರವಾಳಿ ಜಿಲ್ಲೆಗಳಲ್ಲಿ ಭಾರೀ ಮಳೆ-ಜನ ಜೀವನ ಅಸ್ತವ್ಯಸ್ಥ

https://youtu.be/cNICt2Bl8yw?si=THrNNiAox_F37pD0

ಮೂರು ದಿನದ ಹಿಂದೆ ಬಾಲಕಿಯನ್ನು ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಆರೋಗ್ಯದಲ್ಲಿ ಚೇತರಿಕೆ ಕಾಣದ ಹಿನ್ನೆಲೆ ಮೈಸೂರಿನ ಅಪೋಲೊ ಆಸ್ಪತ್ರೆಗೆ ಬಾಲಕಿಯನ್ನು ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಇದೀಗ ಸಾವನ್ನಪ್ಪಿದ್ದಾಳೆ.

https://youtu.be/XF0Va8FGxMI?si=6ycf2KqIaNMXEP_l

ಕಳೆದ ಒಂದು ವಾರದಲ್ಲಿ ಹಾಸನ ಜಿಲ್ಲೆಯಲ್ಲಿ ಶಂಕಿತ ಡೆಂಗ್ಯೂಗೆ ನಾಲ್ವರು ಬಾಲಕಿಯರು ಬಲಿಯಾಗಿದ್ದಾರೆ. ಹೊಳೆನರಸೀಪುರ ತಾಲ್ಲೂಕಿನಲ್ಲೇ ಮೂವರು ಬಾಲಕಿಯರು ಬಲಿಯಾಗಿದ್ದಾರೆ. ಒಟ್ಟಾರೆ ಡೆಂಗ್ಯೂ ಮಹಾಮಾರಿಯಿಂದ ಹಾಸನ ಜಿಲ್ಲೆಯ ಜನತೆ ನಲಗುತ್ತಿದ್ದು, ಸರ್ಕಾರ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಜನ ಆಗ್ರಹಿಸಿದ್ದಾರೆ. ಇದನ್ನೂ ಓದಿ: ವರದಕ್ಷಿಣೆ ಕಿರುಕುಳಕ್ಕೆ ನವವಿವಾಹಿತೆ ಟೆಕ್ಕಿ ಆತ್ಮಹತ್ಯೆಗೆ ಶರಣು

Share with Friends
author avatar
News Desk