ಯುಗಾದಿ ಅಮವಾಸ್ಯೆ ಸ್ನಾನ ಮಾಡಲು ತೆರಳಿದ ಬಾಲಕರು ನೀರು ಪಾಲು
ವಿಜಯಪುರ: ಸಾನ ಮಾಡಲು ತೆರಳೀದ ಇಬ್ಬರು ಮಕ್ಕಳು ನೀರು ಪಾಲಾದ ಘಟನೆ ಜಿಲ್ಲೆಯ ಕೊಲ್ಲಾರ ಬಳಿಯ ಕೃಷ್ಣಾ ನದಿಯಲ್ಲಿ ಸಂಭವಿಸಿದೆ.
ಕಾರಜೋಳ ಗ್ರಾಮದ ಸುದೀಪ ದೊಡ್ಡಮನಿ (12), ಶ್ರೀಧರ್ ದೊಡ್ಡಮನಿ (10) ಎಂಬ ಬಾಲಕರು ನದಿ ಪಾಲಾಗಿದ್ದಾರೆ.
ಯುಗಾದಿ ಅಮಾವಸ್ಯೆ ಹಿನ್ನಲೆಯಲ್ಲಿ ಬಬಲೇಶ್ವರಕಾರಜೋಳ ಗ್ರಾಮದ ಹುಚ್ಚಮ್ಮ ದೇವಿ ಜಾತ್ರಾ ಮಹೋತ್ಸವ ಆಯೋಜನೆ ಆಗಿತ್ತು. ಕಾರಜೋಳ ಗ್ರಾಮದಿಂದ ಕೃಷ್ಣಾ ನದಿಗೆ ದೇವಿಯ ಪಲ್ಲಕ್ಕಿ ಹೊತ್ತು, ದೇವಿಯ ಸ್ನಾನ ಮಾಡಿಸಿಕೊಂಡು ಬರಲು ಗ್ರಾಮಸ್ಥರು ತೆರಳಿದ್ದರು. ಇದನ್ನೂ ಓದಿ: ಕೊನೆಗೂ 19 ನೇ ಮಹಡಿಯಿಂದ ಜಿಗಿದವನ ಗುರುತು ಪತ್ತೆ
ಮೃತಬಾಲಕರು ತಂದೆ-ತಾಯಿಗಳ ಜೊತೆ ತೆರಳಿದ್ದ ವೇಳೆಯೇ ದುರಂತ ಸಂಭವಿಸಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಸ್ಥಳಿಯರ ಸಹಾಯದಿಂದ ಇಬ್ಬರು ಬಾಲಕರ ಶವ ಹೊರಕ್ಕೆ ತೆಗೆಯಲಾಗಿದೆ. ಕೊಲ್ಲಾರ ಪೊಲಿಸ್ ಠಾಣಾ ವ್ತಪ್ತಿಯಲ್ಲಿ ಪ್ರಕರಣ ನಡೆದಿದೆ. ಇದನ್ನೂ ಓದಿ: ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‌ನ 19 ನೇ ಮಹಡಿಯಿಂದ ಜಿಗಿದು ವ್ಯಕ್ತಿ ಸಾವು
