LatestTop Storiesಬೆಳಗಾವಿ-Belagavi

ಬೆಳಗಾವಿಯಲ್ಲಿ ಬಂದ್ ಗೆ ಯಾವಾವುದೇ ಪ್ರತಿಕ್ರಿಯೆ ಕಂಡುಬಂದಿಲ್ಲ..!

ಬೆಳಗಾವಿ: ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಬಿಡುವುದನ್ನು ವಿರೋಧಿಸಿ ಕರ್ನಾಟಕ ಬಂದ್‌ಗೆ ಕರೆ ನೀಡಿದ್ದರೂ, ಕುಂದಾನಗರಿ ಬೆಳಗಾವಿಯಲ್ಲಿ ಬಂದ್‌ಗೆ ಯಾವುದೇ ಪ್ರತಿಕ್ರಿಯೆ ಕಂಡುಬಂದಿಲ್ಲ.

ಯಾವುದೇ ಕನ್ನಡಪರ ಸಂಘಟನೆಗಳು ಅಥವಾ ಸ್ಥಳೀಯ ಮುಖಂಡರು ಬೆಳಗಾವಿ ಬಂದ್‌ಗೆ ಬೆಂಬಲ ನೀಡದ ಹಿನ್ನೆಲೆಯಲ್ಲಿ ನಗರದಲ್ಲಿ ಎಂದಿನಂತೆ ಜನಜೀವನ ಮುಂದುವರಿದಿದೆ.

ನಗರದಲ್ಲಿ ಬಸ್, ಆಟೋ ಹಾಗೂ ಖಾಸಗಿ ವಾಹನಗಳ ಸಂಚಾರ ಎಂದಿನಂತೆ ನಡೆಯುತ್ತಿದೆ. ಅಂಗಡಿ-ಮುಂಗಟ್ಟುಗಳು ಕೂಡ ಎಂದಿನಂತೆ ತೆರೆದು ವ್ಯಾಪಾರ ವಹಿವಾಟು ನಡೆಸುತ್ತಿವೆ.

ದೈನಂದಿನ ಕೆಲಸ ಕಾರ್ಯಗಳಲ್ಲಿ ಜನರು ಎಂದಿನಂತೆ ತೊಡಗಿಸಿಕೊಂಡಿದ್ದಾರೆ. ಶಾಲಾ-ಕಾಲೇಜುಗಳಿಗೆ ವಿದ್ಯಾರ್ಥಿಗಳು ಕೂಡ ಎಂದಿನಂತೆ ತೆರಳುತ್ತಿದ್ದಾರೆ.

ಇನ್ನು ಬೆಳಗಾವಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ. ಈ ಕುರಿತು ಬೆಳಗಾವಿ ನಗರ ಪೊಲೀಸ್ ಕಮಿಷನರ್ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ.

ಒಟ್ಟಾರೆ, ರಾಜ್ಯದ ಹಲವೆಡೆ ಬಂದ್‌ನ ಬಿಸಿ ಕಂಡುಬಂದರೂ ಬೆಳಗಾವಿಯಲ್ಲಿ ಮಾತ್ರ ಬಂದ್‌ಗೆ ಯಾವುದೇ ಬೆಂಬಲ ವ್ಯಕ್ತವಾಗದೆ, ಎಂದಿನಂತೆ ಜನಜೀವನ ಸಾಗುತ್ತಿದೆ.

Share with Friends
author avatar
Digital Desk